ಮಾಲಾಶ್ರೀ ಈಗ ಗಂಗ
Send us your feedback to audioarticles@vaarta.com
1990 ರ ದಶಕದಲ್ಲಿ ಸೂಪರ್ ಹಿಟ್ ಜೋಡಿ ಎಂದೇ ಹೇಳಲಾದ ನಾಯಕಿ ಮಾಲಾಶ್ರೀ ಹಾಗೂ ನಿರ್ದೇಶಕ ಓಂ ಸಾಯಿ ಪ್ರಕಾಷ್ ಅವರ ಬಾಕ್ಸ್ ಆಫೀಸು ಬೊಂಬಾಟ 19 ವರ್ಷಗಳ ನಂತರ ಮತ್ತೆ ಒಂದಾಗುತ್ತಿದೆ.
ಸಾಯಿ ಪ್ರಕಾಶ್ ಹಾಗೂ ಮಾಲಾಶ್ರೀ ಅವರ ಗಂಗ ಸೌಮ್ಯ ಹಾಗೂ ಕ್ರೌರ್ಯ ಗಳ ಸಂಗಮ. ಮಾಲಾಶ್ರೀ ಅವರ ಹಿಂದಿನ ಸೀರೆ ಇಮೇಜ್ ಹಾಗೂ ಇಂದಿನ ಸಾಹಸ ಇಮೇಜ್ ಸಮ್ಮಿಲನದ ಈ ಚಿತ್ರ ರಾಮು ಎಂಟೆರ್ಪ್ರೈಸೆಸ್ ಅಡಿಯಲ್ಲಿ ತಯಾರಾಗುಗುತ್ತಿದೆ. ಇದೆ ತಿಂಗಳ ಜೂನ್ 6 ರಂದು ಮುಹೂರ್ತ ಸಹ ನಿಗದಿ ಆಗಿದೆ. ರಾಮು ಅವರು ಮುತ್ತಿನಂತ ಹೆಂಡತಿ ಮಾಲಾಶ್ರೀ ಅವರ ಎರಡು ಇಮೇಜುಗಳೊಂದಿಗೆ ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ ಮಾಲಾಶ್ರೀ ಅವರು ಗಂಗ ಯಮುನ ಕನ್ನಡ ಸಿನೆಮಾದಲ್ಲಿ ಮಹೇಂದರ್ ಅವರ ನಿರ್ದೇಶನದಲ್ಲಿ ಅಭಿನಯಿಸಿದ್ದರು. ಈಗ ಗಂಗ ಆಗಿ ಗೌರವ ಪಾತ್ರ ಜೊತೆ ಗೂಸಾ ಕೊಡುವ ಪಾತ್ರವನ್ನು ನಿಬಾಯಿಸುತ್ತಿದ್ದಾರೆ.
ನಿರ್ದೇಶಕ ಓಂ ಸಾಯಿ ಪ್ರಕಾಶ್ ಹಾಗೂ ಮಾಲಾಶ್ರೀ ಅಭಿನಯದಲ್ಲಿ ಜನಪ್ರಿಯ ಚಿತ್ರಗಳಾದ ಪೋಲಿಸನ ಹೆಂಡತಿ, ಸೊಲ್ಲಿಲ್ಲದ ಸರದಾರ, ಕಿತ್ತೂರಿನ ಹುಲಿ, ಗೃಹಪ್ರವೇಶ, ರೆಡಿ ಮೆಡ್ ಗಂಡ, ತವರುಮನೆ ಉಡುಗೊರೆ, ಮಾಲಾಶ್ರೀ ಮಾಮಾಶ್ರೀ, ನಗರದಲ್ಲಿ ನಾಯಕರು, ಗಡಿಬಿಡಿ ಅಳಿಯ ಸಿನೆಮಗಳು ಬಂದಿವೆ. 1995ರ ನಂತರ ಈ ಜನಪ್ರಿಯ ಜೋಡಿ ತೆರೆಗೆ ಬರುತ್ತಿದೆ.
ಅಂದಹಾಗೆ ಮಾಲಾಶ್ರೀ ಅವರು ಸೀರೆ ಉಟ್ಟು ಈ ಗಂಗ ಸಿನೆಮಾದಲ್ಲಿ ಕಂಗೊಳಿಸಲಿದ್ದಾರೆ. ಸಾಹಸ ಚಿತ್ರಗಳಿಗೆ ಮಾಲಾಶ್ರೀ ಅವರು ಹೊರಳಿದ ಮೇಲೆ ಅವರು ಸೀರೆ ಉಟ್ಟ ಪಾತ್ರಗಳು ವಿರಳ ಆಗಿದ್ದವು.
ಅರ್ಜುನ್ ಜನ್ಯ ಅವರ ಐದು ಹಾಡುಗಳಿಗೆ ರಾಗ ಸಂಯೋಜನೆ ಇರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮಾಡಲಾಗುವುದು. ರಾಜೇಶ್ ಕಟ್ಟ ಚಿತ್ರದ ಛಾಯಾಗ್ರಾಹಕರು. ಅನಿಲ್ ಕುಮಾರ್ ಅವರು ಸಂಭಾಷಣೆ ಬರೆದಿರುವರು. ಪೋಷಕ ಪಾತ್ರಗಳಲ್ಲಿ ಶ್ರೀನಿವಾಸಮೂರ್ತಿ. ಪವಿತ್ರ ಲೋಕೇಶ್, ಶರತ್ ಲೋಹಿತಾಶ್ವ, ಹೇಮ ಚೌಧರಿ ಹಾಗೂ ಇತರರು ಇದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments